

12th June 2025

ಅದು ಯಾರೊಂದಿಗೂ ಆಗಬಹುದು, ಅನೇಕ ಬಾರಿ ನಮ್ಮ ಅರಿವಿಲ್ಲದೆಯೇ. ಅದಕ್ಕೆ ವಯಸ್ಸು, ಭಾಷೆ, ಧರ್ಮ, ವರ್ಣದ ಯಾವುದೇ ಮಿತಿಯಿಲ್ಲ. ಅಂತಹ ಒಂದು ಅನನ್ಯ ಸ್ನೇಹದ ಕಥೆಯು ವಾಣಿಶ್ರೀ ಫಿಲ್ಮ ಪ್ರೊಡಕ್ಷನ್ಸ್ನ 'ಆಲ್ ಇಸ್ ವೆಲ್' ಮರಾಠಿ ಚಲನಚಿತ್ರದ ಮೂಲಕ ಮರಾಠಿ ಬೆಳ್ಳಿ ಪರದೆಯ ಮೇಲೆ ಮೂಡಿಬರಲಿದೆ.
ಇದು ಅಮರ್, ಅಕ್ಟರ್ ಮತ್ತು ಆಂಟನಿ ಅವರ ಸ್ನೇಹದ ಕಥೆಯಾಗಿದೆ. ಮನರಂಜನೆ ಮತ್ತು ಮಸ್ತಿಯ ಅದ್ಭುತ ಪ್ಯಾಕೇಜ್ ಹೊಂದಿರುವ 'ಆಲ್ ಇಸ್ ವೆಲ್' ಚಲನಚಿತ್ರವನ್ನು ಯೋಗೇಶ್ ಜಾಧವ್ ನಿರ್ದೇಶಿಸಿದ್ದು, ಪ್ರಿಯದರ್ಶನ್ ಜಾಧವ್ ಬರೆದಿದ್ದಾರೆ. ಬೆಳಗಾವಿಯವರಾದ ನಿರ್ಮಾಪಕರು ಅಮೊದ್ ಮುಚಂಡಿಕರ್, ವಾಣಿ ಹಲಪ್ಪನವರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಹ-ನಿರ್ಮಾಪಕರು ಮಲ್ಲೇಶ್ ಸೋಮನಾಥ ಮರುಚೆ, ವಿನಾಯಕ ಪಟ್ಟಣಶೆಟ್ಟಿ. ನಿರ್ಮಾಣ ಮೇಲ್ವಿಚಾರಕರು ದೀಪಕ್ ಸಾಂಬ್ರೇಕರ್, ಅಮಿತ್ ಜಾಧವ್. ಮುಂಬರುವ ಜೂನ್ 27 ರಂದು 'ಆಲ್ ಇಸ್ ವೆಲ್' ಚಲನಚಿತ್ರ ಎಲ್ಲೆಡೆ ಬಿಡುಗಡೆಯಾಗಲಿದೆ. ಇದು ಕುಟುಂಬದೊಂದಿಗೆ ಆನಂದಿಸಬಹುದಾದ ಹಾಸ್ಯದ ಔತಣವಾಗಿದ್ದು, 'ಆಲ್ ಇಸ್ ವೆಲ್' ಚಲನಚಿತ್ರವು ಮನರಂಜನೆಯ ಅದ್ಭುತ ಕೊಡುಗೆಯಾಗಲಿದೆ ಎಂದುಆನಂದ, ಕೋಪ, ಮನಸ್ಸಿನ ರಹಸ್ಯಗಳನ್ನು ವ್ಯಕ್ತಪಡಿಸಲು ಆತ್ಮೀಯ ಸ್ನೇಹಿತರಿದ್ದರೆ ಜೀವನವು ವರ್ಣರಂಜಿತವಾಗುತ್ತದೆ ಎಂಬ ಆಶಯವನ್ನು ಎತ್ತಿಹಿಡಿಯುವ 'ಆಲ್ ಇಸ್ ವೆಲ್' ಚಿತ್ರದ ಮೂಲಕ ಪ್ರಿಯದರ್ಶನ್ ಜಾಧವ್, ಅಭಿನಯ್ ಬೇರ್ಡೆ, ರೋಹಿತ್ ಹಳದಿಕರ್ ಈ ಅದ್ಭುತ ತ್ರಿಮೂರ್ತಿಗಳು ಮೊದಲ ಬಾರಿಗೆ ಒಂದಾಗಿದ್ದಾರೆ. ಇವರೊಂದಿಗೆ ಸಯಾಜಿ ಶಿಂಧೆ, ಅಭಿಜಿತ್ ಚವಾಣ್, ನಕ್ಷತ್ರಾ ಮೇಧೇಕರ್, ಸಾಯಲಿ ಫಾಟಕ, ಮಾಧವ್ ವಾಯ್ಲಿ, ಅಜಯ್ ಜಾಧವ್, ಅಮೈರಾ ಗೋಸ್ವಾಮಿ, ದಿಶಾ ಕಟ್ಕರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 'ಆಲ್ ಇಸ್ ವೆಲ್' ಚಲನಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಂಜಯ್ ಥುಬೆ. ಸಂಗೀತ ಚಿನಾರ್-ಮಹೇಶ್, ಅರ್ಜುನ್ ಜನ್ಯಾ ಅವರದ್ದು. ಛಾಯಾಗ್ರಹಣ ಮಯೂರೇಶ್ ಜೋಶಿ ಮತ್ತು ಸಂಕಲನ ಅಥಶ್ರೀ ಥುಬೆ ಅವರದ್ದು. ನೃತ್ಯ ನಿರ್ದೇಶಕ ರಾಜೇಶ್ ಬಿಡ್ಡೆ ಮತ್ತು ಸಾಹಸ ದೃಶ್ಯಗಳು ಅಜಯ್ ಠಾಕೂರ್ ಪಠಾಣಿಯಾ ಅವರದ್ದು. ವಸ್ತ್ರ ವಿನ್ಯಾಸ ಕೀರ್ತಿ ಜಂಗಮ್ ಮತ್ತು ಮೇಕಪ್ ಅತುಲ್ ಶಿಧಾಯೆ ಅವರದ್ದು. ಗೀತ ರಚನೆಕಾರ ಮಂದಾರ್ ಚೋಲ್ಕರ್. ಗಾಯಕ ರೋಹಿತ್ ರಾವುತ್, ಗಾಯಕಿ ಅಪೇಕ್ಷಾ ದಾಂಡೇಕರ್ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.ಯುವಕರ ಕಥಾಹಂದರ ಹೊಂದಿರುವ 'ಆಲ್ ಇಸ್ ವೆಲ್' ಚಲನಚಿತ್ರವು ಕಲಾವಿದರ ಸುಂದರ ಅಭಿನಯ, ಮಧುರ ಸಂಗೀತ ಮತ್ತು ನಯನಮನೋಹರ ಪ್ರಸ್ತುತಿಯಿಂದ ಶ್ರೀಮಂತವಾಗಿದೆ.

ಸಾಮಾಜಿಕ ನಾಟಕಗಳನ್ನು ನೋಡಿ ಹೆಚ್ಚು ಪ್ರೋತ್ಸಾಹಿಸಿ : ಉಪನ್ಯಾಸಕ ಸಿಎಂ ಚನ್ನಬಸಯ್ಯಸ್ವಾಮಿ ಅಭಿಪ್ರಾಯ

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ